Sunday 13 May 2012

SAKKARE





SAKKARE CREW
Director:   B.Suresh
Music Director:   V Harikrishna
Lyricst: Yograj Bhat


ಗಣೇಶ್‌ 'ಸಕ್ಕರೆ'ಯಿಂದ ರಾಧಿಕಾ ಔಟ್, ದೀಪಾ ಇನ್

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ 'ಸಕ್ಕರೆ' ಚಿತ್ರದ ನಾಯಕಿ ಬದಲಾಗಿದ್ದಾರೆ. ರಾಧಿಕಾ ಪಂಡಿತ್ ಬದಲಿಗೀಗ ಆ ಜಾಗಕ್ಕೆ ದೀಪಾ ಸನ್ನಿಧಿ ಬಂದಿದ್ದಾರೆ. ಇದರೊಂದಿಗೆ ಗಣೇಶ್-ರಾಧಿಕಾ ಜೋಡಿಯ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಖಚಿತ.
ನಿರ್ದೇಶಕ ಬಿ. ಸುರೇಶ್ ನಿರ್ಮಾಣ ಸಂಸ್ಥೆ ಮೀಡಿಯಾ ಹೌಸ್‌ನಿಂದ ನಿರ್ಮಾಣವಾಗುತ್ತಿರುವ ಸಕ್ಕರೆಯನ್ನು ನಿರ್ದೇಶಿಸುತ್ತಿರುವುದು 'ಶಿಕಾರಿ' ಅಭಯ ಸಿಂಹ.
ರಾಧಿಕಾ ಪಂಡಿತ್ ಈ ಚಿತ್ರದಿಂದ ಹೊರ ನಡೆಯಲು ಕಾರಣವೇನು...? ವಿವಾದವಂತೂ ಇಲ್ಲಿಲ್ಲ. ಡೇಟ್ಸ್ ಸಮಸ್ಯೆ. ಪ್ರಸಕ್ತ ಯೋಗರಾಜ್ ಭಟ್ಟರ 'ಡ್ರಾಮಾ'ದಲ್ಲಿ ಬ್ಯುಸಿಯಾಗಿರುವ ರಾಧಿಕಾ ಕೆಲಸ ಇನ್ನೂ ಸ್ವಲ್ಪ ದಿನ ಬಾಕಿಯಿದೆ. ನಂತರ ಒಪ್ಪಿಕೊಂಡಿರುವ ಬೇರೆ ಚಿತ್ರಗಳ ಶೂಟಿಂಗ್. ಅಂದರೆ ಇನ್ನೂ ಒಂದಷ್ಟು ತಿಂಗಳ ಕಾಲ 'ಸಕ್ಕರೆ' ಟೀಮ್ ರಾಧಿಕಾಗಾಗಿ ಕಾಯಬೇಕಾಗುತ್ತದೆ. ಬಹುಶಃ ಇದೇ ಕಾರಣದಿಂದ ರಾಧಿಕಾ ಈ ಪ್ರೊಜೆಕ್ಟ್‌ನಿಂದ ದೂರ ಉಳಿದಿದ್ದಾರೆ.
ಆ ಜಾಗಕ್ಕೀಗ ಬಂದಿರುವುದು ಸಾರಥಿ, ಪರಮಾತ್ಮ ಖ್ಯಾತಿಯ ದೀಪಾ ಸನ್ನಿಧಿ. ಇಬ್ಬರು ಸ್ಟಾರ್ ನಟರ ಜತೆ ರೊಮ್ಯಾನ್ಸ್ ಮಾಡಿದ ನಂತರ ಇದೀಗ ದೀಪಾಗೆ ಗೋಲ್ಡನ್ ಸ್ಟಾರ್ ಸಿಕ್ಕಿದ್ದಾರೆ.
ದೀಪಾ ದೊಡ್ಡ ಸ್ಟಾರುಗಳಿಗೆ ನಾಯಕಿಯಾಗುವುದು ಇಷ್ಟಕ್ಕೇ ನಿಂತಿಲ್ಲ. ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದಲ್ಲಿ ಕಿಚ್ಚ ಸುದೀಪ್‌ಗೆ, 'ಜಯಮ್ಮನ ಮಗ'ನಲ್ಲಿ ದುನಿಯಾ ವಿಜಯ್‌ಗೆ ಈಕೆಯೇ ಹೀರೋಯಿನ್. ಇವೆರಡು ಚಿತ್ರಗಳ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಹಾಗಾಗಿ ಸದ್ಯ ಸಕ್ಕರೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ನಾನು ನನ್ನ ಕನಸು ಮತ್ತು ಪುಟ್ಟಕ್ಕನ ಹೈವೇ ಚಿತ್ರಗಳು ಮೀಡಿಯಾ ಹೌಸ್ ನಿರ್ಮಾಣ ಸಂಸ್ಥೆಯಡಿಯಲ್ಲಿ ತಯಾರಾಗಿದ್ದವು. ಬಿ. ಸುರೇಶ್ ಮತ್ತು ಪ್ರಕಾಶ್ ರೈ ಜಂಟಿಯಾಗಿ ನಿರ್ಮಾಪಕರಾಗಿದ್ದರು. ಆದರೆ ಈ ಬಾರಿ ಸುರೇಶ್ ಒಬ್ಬರೇ ಸಕ್ಕರೆಯನ್ನು ನಿರ್ಮಿಸುತ್ತಿದ್ದಾರೆ.
ಸುರೇಶ್‌ಗೆ ಗಣೇಶ್ ಹೊಸಬರೇನಲ್ಲ. ಸಹಾಯಕ ನಿರ್ದೇಶಕರಾಗಿ ಇದೇ ಸುರೇಶ್ ಕ್ಯಾಂಪಿನಲ್ಲಿ ಗಣೇಶ್ ಕೆಲಸ ಮಾಡಿದ್ದವರು. ಹಾಗಾಗಿ ಒಂದು ರೀತಿಯಲ್ಲಿ ಗಣೇಶ್‌ಗೆ ಸುರೇಶ್ ಗುರು.

Golden Star Ganesh and Deepa Sannidhi starrer Sakkare has been launched on Monday early morning with a Pooja in Dodda Ganapathy Temple at Bull Temple Road. The Pooja was held quite early in the morning and immediately thereafter the unit members moved to Madikeri for further shooting of the film. The film is being produced by Shylaja Nag and B.Suresha of Media House Productions and directed by Abhay Simha who had already directed an award winning film “Gubbachchigalu’ earlier and bilingual film “Shkari’ with Malayalam Super Star Mammootty in the lead role.
Hari Krishna is the music director of the film for which all the five songs of the film has been written by Yogaraj Bhat. The film will be shot for ten days in Madikeri after which the unit is returning to Bengaluru. Later there will be a break for the shooting of the film. The second schedule of the film has not been planned yet

No comments:

Post a Comment